速報APP / 教育 / ಮಾನವ ಅಂಗರಚನಾಶಾಸ್ತ್ರ

ಮಾನವ ಅಂಗರಚನಾಶಾಸ್ತ್ರ

價格:免費

更新日期:2018-08-09

檔案大小:42M

目前版本:1.13

版本需求:Android 3.0 以上版本

官方網站:https://www.focusmedica.com

Email:apps@focusmedica.in

聯絡地址:Focus Medica India Pvt Ltd 33, First Floor, First Main, Koramangala First Block Bangalore - 560034 India

ಮಾನವ ಅಂಗರಚನಾಶಾಸ್ತ್ರ(圖1)-速報App

ಅಸ್ಥಿಪಂಜರ ಮತ್ತು ಸ್ನಾಯು ವ್ಯವಸ್ಥೆಯ ಬಗ್ಗೆ ಸರಳ ನಿರೂಪಣೆ ಒಳಗೊಂಡ ಈ ಅನಿಮೇಶನ್ಗಳಲ್ಲಿ ಅಸ್ಥಿಪಂಜರದ ರಚನೆ, ಮೂಳೆಗಳ ಸಂಖ್ಯೆ, ಅವು ಹೇಗೆ ರೂಪುಗೊಂಡಿವೆ, ಕೀಲುಗಳು, ಸ್ನಾಯುಗಳು, ಅವುಗಳ ಪ್ರಕಾರಗಳು, ಹಾಗೂ ಇವೆಲ್ಲ ಒಟ್ಟುಗೂಡಿ ದೈಹಿಕ ಚಲನೆಗೆ ಹೇಗೆ ಸಹಕಾರಿಯಾಗಿವೆ ಎಂಬುದನ್ನು ತುಂಬಾ ಸುಲಭವಾಗಿ ವಿವರಿಸಲಾಗಿದೆ.

ಮಾನವ ಅಂಗರಚನಾಶಾಸ್ತ್ರ(圖2)-速報App

ನರವ್ಯವಸ್ಥೆಯ ಬಗ್ಗೆ ಕಲಿಯುವುದು ಈಗ ಕಷ್ಟದ ಕೆಲಸವೇನಲ್ಲ! ಮಾನವ ಮೆದುಳು ಮತ್ತು ಅದರ ಭಾಗಗಳು, ನರಗಳು ಮತ್ತು ಅವು ಏನು ಕೆಲಸ ಮಾಡುತ್ತವೆ, ಪಂಚೇಂದ್ರಿಯಗಳು, ಹಾಗೂ ಅವು ಹೇಗೆ ಕೆಲಸ ಮಾಡುತ್ತವೆ - ಒಬ್ಬ ವ್ಯಕ್ತಿಗೆ ಈ ಮುಂಚೆ ಗೊತ್ತಿಲ್ಲದ ಸಂಗತಿಗಳು, ಇವುಗಳೆಲ್ಲವನ್ನೂ ಈ ಅದ್ಭುತ ಅನಿಮೇಶನ್ಗಳು ಮತ್ತು ಸುಸ್ಪಷ್ಟ ವ್ಯಾಖ್ಯಾನಗಳ ಮೂಲಕ ಅರಿತುಕೊಳ್ಳಬಹುದು.

ಮಾನವ ಅಂಗರಚನಾಶಾಸ್ತ್ರ(圖3)-速報App

ರಕ್ತಪರಿಚಲನಾ ವ್ಯವಸ್ಥೆಯನ್ನು ಅರಿತುಕೊಳ್ಳುವುದು ಈಗ ಅತಿ ಸುಲಭ! ಹೃದಯದ ರಚನೆ ಮತ್ತು ಕಾರ್ಯನಿರ್ವಹಣೆ, ರಕ್ತ ಪರಿಚಲನೆ ಮತ್ತು ಒತ್ತಡ, ರಕ್ತದ ಕಣಗಳು, ಗುಂಪುಗಳು, ಮತ್ತು ಅವುಗಳ ಕೆಲಸಗಳನ್ನು ತಾಂತ್ರಿಕವಾಗಿ ಅತ್ಯಂತ ಮುಂದುವರಿದ ಅನಿಮೇಶನ್ಗಳು ಮತ್ತು ಸರಳ ವ್ಯಾಖ್ಯಾನಗಳ ಮುಖಾಂತರ ವಿವರಿಸಲಾಗಿದೆ.

ಮಾನವ ಅಂಗರಚನಾಶಾಸ್ತ್ರ(圖4)-速報App

ಉಸಿರಾಟ ವ್ಯವಸ್ಥೆಯ ಸವಿಸ್ತಾರ ಕಾರ್ಯಗಳು; ಉಸಿರಾಟ ಪ್ರಕ್ರಿಯೆ, ಅನಿಲಗಳ ವಿನಿಮಯ ಮತ್ತು ಧ್ವನಿ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಈ ಮನೋಹರ ಸದೃಶ್ಯ ನಿರೂಪಣೆಯಲ್ಲಿ ಸುಲಭವಾದ ರೀತಿಯಲ್ಲಿ ವಿವರಿಸಲಾಗಿದೆ!

ಮಾನವ ಅಂಗರಚನಾಶಾಸ್ತ್ರ(圖5)-速報App

ಜೀರ್ಣ ಮತ್ತು ವಿಸರ್ಜನಾ ವ್ಯವಸ್ಥೆಯನ್ನು ಕುರಿತಾಗಿ ತಿಳಿಸುವ ಅದ್ಭುತ ಅನಿಮೇಶನ್ಗಳು ಮತ್ತು ನಿರೂಪಣೆ ನಿಮ್ಮನ್ನು ದೈಹಿಕ ಪ್ರಕ್ರಿಯೆಗಳ ಬಗ್ಗೆ ವಿವರಣೆ ನೀಡುವುದಷ್ಟೇ ಅಲ್ಲದೇ ಮೂತ್ರಪಿಂಡ, ಅದರ ಅತಿಮುಖ್ಯ ಭಾಗಗಳು ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಒಳಗೊಂಡಂತೆ ಈ ಜಟಿಲ ಪ್ರಕ್ರಿಯೆಗಳಲ್ಲಿ ಬರುವ ಪ್ರತಿಯೊಂದು ಅಂಗದ ಪಾತ್ರದ ಬಗ್ಗೆ ಸ್ವಾರಸ್ಯಕರ ರೀತಿಯಲ್ಲಿ ಮಾಹಿತಿ ಒದಗಿಸುತ್ತವೆ.

ಮಾನವ ಅಂಗರಚನಾಶಾಸ್ತ್ರ(圖6)-速報App

ಸಂತಾನೋತ್ಪತ್ತಿ ವ್ಯವಸ್ಥೆಯ ಬಗ್ಗೆ ಸರಳ ನಿರೂಪಣೆ ಒಳಗೊಂಡ ಈ ಅತ್ಯುತ್ತಮ ಅನಿಮೇಶನ್ಗಳು ಗರ್ಭಧರಿಸುವ ಪ್ರಕ್ರಿಯೆಯಿಂದ ಹಿಡಿದು, ಮಗುವಿನ ಜನನ ಮತ್ತು ಪ್ರೌಢಾವಸ್ಥೆಯವರೆಗೆ ದೇಹದಲ್ಲಾಗುವ ಬದಲಾವಣೆಗಳವರೆಗೆ ಸವಿಸ್ತಾರ ವಿವರಣೆ ನೀಡುತ್ತದೆ.

ಮಾನವ ಅಂಗರಚನಾಶಾಸ್ತ್ರ(圖7)-速報App

ಹಕ್ಕುನಿರಾಕರಣೆ: ಈ ಅಪ್ಲಿಕೇಶನ್ ಮೂಲಕ ನೀಡಲಾಗಿರುವ ಮಾಹಿತಿಯನ್ನು ಕೇವಲ ತಿಳಿವಳಿಕೆಗೆ ನೀಡುವುದಾಗಿರುತ್ತದೆ ಮತ್ತು ಅದನ್ನು ವೈದ್ಯಕೀಯ ಸಲಹೆಗೆ ಪೂರಕವೆಂದು ಪರಿಗಣಿಸಬಾರದು.